ಅಭಿಪ್ರಾಯ / ಸಲಹೆಗಳು

ಕ.ಪ.ಪು.ಸಂ.ಕುರಿತು

 1. ಪಠ್ಯಪುಸ್ತಕ ಸಂಘದ ರಚನೆ:

ಕರ್ನಾಟಕ ಪಠ್ಯಪುಸ್ತಕ ಸಂಘವು ದಿನಾಂಕ 01.04.2006 ರಂದು ಅಸ್ತಿತ್ವಕ್ಕೆ ಬಂದಿತು. ಸಂಘವು ಸರ್ಕಾರಿ ಆದೇಶ ಸಂಖ್ಯೆ ಇಡಿ 95 ಡಿಜಿಒ 2005, ಬೆಂಗಳೂರು ದಿನಾಂಕ 04.01.2006 ರ ಅನ್ವಯ ಸರ್ಕಾರ ಅನುಮೋದಿಸಿದ ಪಠ್ಯಪುಸ್ತಕಗಳ ರಚನೆ, ಪರಿಷ್ಕರಣೆ  ಮುದ್ರಣ ಹಾಗೂ ಸರಬರಾಜಿಗೆ ಸಂಬಂಧಿಸಿದ ಒಂದು ಅಂಗಸಂಸ್ಥೆಯೆಂದು ಘೋಷಿಸಲ್ಪಟ್ಟಿದೆ. ಇದನ್ನು ಕೆ. ಪಿ .ಸುರೇಂದ್ರನಾಥ ಸಮಿತಿ ಶಿಫಾರಸ್ಸಿನಂತೆ ಸಂಘದ ರೂಪದಲ್ಲಿ ಒಂದು ಸ್ವಾಯತ್ತ ಸಂಸ್ಥೆ ಇರಬೇಕೆಂದು ರಚಿಸಲಾಗಿದೆ. ಸಂಘಗಳ ನೊಂದಣಿ ಕಾಯಿದೆ 1966 ರ ಪ್ರಕಾರ ಸಂಘವನ್ನು ದಿನಾಂಕ 12.05.2006 ರಂದು ನೊಂದಾಯಿಸಲಾಗಿದೆ.  ಈ ಸಂಘವು ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಗಳ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿರುವುದರಿಂದ ತ್ವರಿತವಾದ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಉಚಿತ ಮತ್ತು ಮಾರಾಟದ ಪುಸ್ತಕಗಳನ್ನು ಸಮರ್ಥವಾಗಿ ವಿತರಿಸಲು ಅನುಕೂಲವಾಗಿದೆ .

 1. ನೂತನ ಪಠ್ಯಕ್ರಮದೆಡೆಗೆ - ನೂತನ ಪಠ್ಯಪುಸ್ತಕಗಳು

ಮಾನವನ ಅನುಭವದಲ್ಲಿ ಸಕಲ ಕ್ಷೇತ್ರಗಳಲ್ಲೂ  ಜ್ಞಾನವು ನಮ್ಮ ನಿರೀಕ್ಷೆಗಿಂತ ವೇಗವಾಗಿ ವೃದ್ದಿಯಾಗುತ್ತಿರುವುದರಿಂದ ಹಾಗೂ ಸಾಮಾಜಿಕ ರಾಷ್ಟ್ರೀಯ ಆಶೋತ್ತರಗಳು ಬದಲಾಗುತ್ತಿರುವುದರಿಂದ,  ಈ ಸಂದರ್ಭದಲ್ಲಿ ಶಿಕ್ಷಣ  ವ್ಯವಸ್ಥೆ ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಪ್ರಗತಿಯ ಲಕ್ಷಣ. ಇಂದು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿ ಅಸಾಧಾರಣ ಗತಿಯಲ್ಲಿ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಶಿಕ್ಷಣದಲ್ಲಿ ಸೂಕ್ತ ಬದಲಾವಣೆಗಳನ್ನು ತರುವುದು ಅನಿವಾರ್ಯವಾಗಿದೆ. ಆದ್ದರಿಂದ  ಭಾರತ ಸರ್ಕಾರವು NCF-2005  ಅಡಿಯಲ್ಲಿ ಮಾಡಿರುವ ಶಿಫಾರಸುಗಳ ಆಧಾರದಲ್ಲಿ ಕರ್ನಾಟಕ ಸರ್ಕಾರವು ನೂತನ ಪಠ್ಯಕ್ರಮ  KCF -2007 ಜಾರಿಗೆ ತಂದಿದೆ. ಶಾಲೆಯ ಹೊರಗಿನ ಬದುಕಿಗೆ ಜ್ಞಾನ ಸಂಯೋಜನೆ, ಜ್ಞಾನದ ಅಭಿವೃದ್ಧಿಗೆ ಕಲಿಕಾ ಅನುಭವಗಳನ್ನು ಬಳಸುವುದು, ಮಕ್ಕಳು ಸಂತಸದಿಂದ ಕಲಿಯುವುದು, ಕಲಿಕೆ ಪಠ್ಯಪುಸ್ತಕ ಕೇಂದ್ರೀಕೃತವಾಗದೇ ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಪ್ರೇರಕವಾಗುವುದು ಅತ್ಯಗತ್ಯ. ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವಂತಹ NCF ನ ಆಶಯವನ್ನುಆಧರಿಸಿ ನೂತನ ಪಠ್ಯಪುಸ್ತಕಗಳನ್ನುರಚಿಸಲಾಗಿದೆ.

ಉತ್ತಮ ಡಿ.ಟಿ.ಪಿ, ಮುಖ ಪುಟ ವಿನ್ಯಾಸ ಹಾಗೂ ಉತ್ತಮ ಚಿತ್ರಗಳು ಹಾಗೂ  ವಿಷಯದ ಉತ್ತಮ ವಿವರಣೆ, ಜೋಡಣೆಯೊಂದಿಗೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಹೆಚ್ಚು ಆಕರ್ಷಕವಾಗಿ  ಹಾಗೂ ಸಂಪದ್ಬರಿತವಾಗಿ ಮಾಡಲು ನುರಿತ ಶಿಕ್ಷಣ  ತಜ್ಞರು ಹಾಗೂ ಶಿಕ್ಷಕರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುತ್ತದೆ. ಪಠ್ಯಪುಸ್ತಕಗಳ ರಚನೆಯು ಬಹುಹಂತಗಳ ಕಾರ್ಯವಾಗಿದೆ. ಪಠ್ಯಪುಸ್ತಕಗಳನ್ನು 12 ಭಾಷೆಗಳಲ್ಲಿ  ಹಾಗೂ 7 ಮಾಧ್ಯಮಗಳಲ್ಲಿ  ನೀಡಲಾಗುತ್ತದೆ. ರಚನೆಯ ನಂತರ  ಪಠ್ಯಪುಸ್ತಕಗಳನ್ನು ರಾಜ್ಯದ ಎಲ್ಲಾ ಡಯಟ್ ಹಾಗೂ ಸಿ.ಟಿ.ಇಗಳಿಗೆ ಕಳುಹಿಸಿ ಶಿಕ್ಷಣ ತಜ್ಞರಿಂದ, ಶಿಕ್ಷಕರುಗಳಿಂದ ಮತ್ತು ಪೋಷಕರಿಂದ ಸಲಹೆಗಳನ್ನು ಪಡೆಯಲಾಗುತ್ತದೆ. ಕರ್ನಾಟಕ ಸರ್ಕಾರ ನೇಮಿಸುವ ವಿವಿಧ ವಿಷಯದಲ್ಲಿ ತಜ್ಞರನ್ನೊಳಗೊಂಡ ಸಂಪಾದಕೀಯ ಮಂಡಳಿಯು ಸಹ ಕೂಲಂಕಷವಾಗಿ ಪರಿಶೀಲಿಸಿ ನೀಡುವ ವರದಿಯ ಅಂಶಗಳನ್ನೂ ಸೇರಿಸಿ ಪಠ್ಯಪುಸ್ತಕಗಳನ್ನು ಅಂತಿಮವಾಗಿ ಪರಿಷ್ಕರಿಸಲಾಗುವುದು. 2019-20 ನೇ ಸಾಲಿನಿಂದ ಪಠ್ಯಪುಸ್ತಕಗಳಲ್ಲಿ Q.R Code ಗಳನ್ನು ಅಳವಡಿಸಲಾಗಿದ್ದು ಇವುಗಳನ್ನು Android mobile ನಲ್ಲಿ ಸ್ಕಾನ್ ಮಾಡುವ ಮೂಲಕ  ವಿಷಯಕ್ಕೆ ಸಂಬಂಧಿಸಿದ  ಹೆಚ್ಚಿನ  ಮಾಹಿತಿ ಹಾಗೂ ಅಭ್ಯಾಸಗಳನ್ನು Download ಮಾಡಿಕೊಳ್ಳಬಹುದಾಗಿದೆ. ಈ ತಂತ್ರಜ್ಞಾನವು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಠಿಸಿದೆ.

 1. ವಿಶಾಲ ವ್ಯಾಪ್ತಿ

ಕರ್ನಾಟಕ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 10 ನೇ ತರಗತಿಗಳ ಸುಮಾರು 100 ಲಕ್ಷ ಮಕ್ಕಳಿಗೆ ಕರ್ನಾಟಕ ರಾಜ್ಯದ ಪಠ್ಯವಸ್ತುವನ್ನು ಆಧರಿಸಿರುವ ಪಠ್ಯಪುಸ್ತಕಗಳ ರಚನೆ,ಪರಿಷ್ಕರಣೆ,ಮುದ್ರಣ ಹಾಗೂ ಸರಬರಾಜಿನ ಜವಾಬ್ದಾರಿಯು ಸಂಘದ್ದಾಗಿದೆ. ಪಠ್ಯಪುಸ್ತಕಗಳನ್ನು ಉಚಿತ ಹಾಗೂ ಮಾರಾಟ ಎಂಬ ಎರಡು ವಿಭಾಗಗಳಲ್ಲಿ ಮುದ್ರಿಸಲಾಗುತ್ತದೆ. ಸರ್ಕಾರಿ ಹಾಗೂ ಅನುದಾನಿತ  ಶಾಲೆಗಳಿಗೆ  ಉಚಿತ ಪಠ್ಯಪುಸ್ತಕಗಳನ್ನು  ನೀಡಲಾಗುತ್ತಿದೆ. ಸಂಘವು ಸುಮಾರು 545 ಶೀರ್ಷಿಕೆಗಳನ್ನು ತಯಾರಿಸಿ, ಮುದ್ರಿಸಿ ಸರಬರಾಜು ಮಾಡಲಾಗುತ್ತಿದೆ. ಇದರ ಜೊತೆಗೆ ಸಂಘವು 1 ರಿಂದ 12 ನೇ ತರಗತಿಯವರೆಗೆ ವಿದ್ಯಾರ್ಥಿ ದಿನಚರಿ,  ಪಿ.ಯು.ಸಿ ಪಠ್ಯಪುಸ್ತಕಗಳು ,4 ರಿಂದ 10 ನೇ ತರಗತಿವರೆಗೆ, ಅಭ್ಯಾಸ ಪುಸ್ತಕ,ಆದರ್ಶ ವಿದ್ಯಾಲಯಗಳ ಪಠ್ಯಪುಸ್ತಕಗಳು, ನಲಿಕಲಿ ಕಾರ್ಡ್ಗಳು , 9 ರಿಂದ 12 ನೇ ತರಗತಿ NSQF ಪಠ್ಯಪುಸ್ತಕಗಳು , 8 ರಿಂದ 10 ನೇ ತರಗತಿಯ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ  ಪ್ರತ್ಯೇಕ ಪಠ್ಯಪುಸ್ತಕಗಳು ಹಾಗೂ ಪಠ್ಯೇತರ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಮುದ್ರಿಸುತ್ತದೆ.

 1. ಚಟುವಟಿಕೆಗಳು

 ಸಮಗ್ರ ಶಿಕ್ಷಣ  ಕರ್ನಾಟಕ ಯೋಜನೆಯಲ್ಲಿ  ರಾಜ್ಯದ ಅನುದಾನಿತ ಶಾಲೆಗಳ 1 ರಿಂದ 8 ನೇ ತರಗತಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳ ಖರ್ಚನ್ನು ಭರಿಸುತ್ತದೆ. 2011-12 ನೇ ಸಾಲಿನಿಂದ ಅನುದಾನಿತ ಶಾಲೆಗಳ 9 ಮತ್ತು 10 ನೇ ತರಗತಿ ಮಕ್ಕಳಿಗೂ ಉಚಿತ ಪಠ್ಯಪುಸ್ತಕಗಳನ್ನು   ವಿತರಿಸುವ ಯೋಜನೆಯನ್ನು ಜಾರಿಗೆ ತಂದಿತು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಪಠ್ಯಪುಸ್ತಕಗಳನ್ನು ಸಹ ಸಂಘವು ಮುದ್ರಿಸುತ್ತದೆ. ಸಮಗ್ರ ಶಿಕ್ಷಣ  ಕರ್ನಾಟಕದ ನೂತನ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳಿಗೆ ಅಭ್ಯಾಸ ಪುಸ್ತಕಗಳನ್ನು ಮುದ್ರಿಸಿ  ಸರಬರಾಜು ಮಾಡಲಾಗುತ್ತಿದೆ.

ಪ್ರಾದೇಶಿಕ ಪ್ರಾಮುಖ್ಯತೆ,ಸಾಹಿತ್ಯ,ಸ್ಥಳೀಯ ಚರಿತ್ರೆಯನ್ನು ವಿದ್ಯಾರ್ಥಿಗಳು ಅಭ್ಯಾಸ  ಮಾಡಬೇಕಾಗಿರುವುದರಿಂದ ಭಾಷೆ  ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ರಾಜ್ಯ ಪಠ್ಯಕ್ರಮದನ್ವಯ ಸಿದ್ದಪಡಿಸಿದೆ. ನಮ್ಮ ರಾಜ್ಯದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಹಕಾರಿಯಾಗುವಂತೆ  6 ರಿಂದ 10  ತರಗತಿವರೆಗೆ ವಿಜ್ಞಾನ ಮತ್ತು ಗಣಿತ ವಿಷಯಗಳ ಶೀರ್ಷಿಕೆಗಳಿಗೆ NCERT ಪಠ್ಯಪುಸ್ತಕಗಳನ್ನು ಯಥಾವತ್ತಾಗಿ ಅಳವಡಿಸಲಾಗಿದೆ.

 2019 - 20 ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದಲ್ಲಿ ಪ್ರಾರಂಭಿಸಲಾಗಿರುವ  1000  ಸರ್ಕಾರಿ ಶಾಲೆಗಳಲ್ಲಿ 1 ತರಗತಿಯ  ಆಂಗ್ಲ ಮಾಧ್ಯಮ  ವಿಭಾಗಗಳಿಗೆ  NCERT ಆಂಗ್ಲ ಭಾಷಾ ಪುಸ್ತಕ ಮತ್ತು ಗಣಿತ (ದ್ವಿ- ಭಾಷೆ)  ಪಠ್ಯಪುಸ್ತಕಗಳನ್ನು   ಹಾಗೂ ರಾಜ್ಯ ಪಠ್ಯಕ್ರಮದ ಪರಿಸರ ಅಧ್ಯಯನ  (ದ್ವಿ- ಭಾಷೆ)  ಅಳವಡಿಸಿಕೊಳ್ಳಲಾಗಿದೆ. 2020-21 ನೇ ಸಾಲಿಗೆ 2 ನೇ ತರಗತಿಗೂ ಆಂಗ್ಲ ಮಾಧ್ಯಮ  ವಿಭಾಗಗಳಿಗೆ ಮುಂದುವರಿಸಲಾಗಿದೆ.

 1. ಮುದ್ರಣದಲ್ಲಿ ಪಾರದರ್ಶಕತೆ

ಈ ಪಠ್ಯಪುಸ್ತಕಗಳ ಮುದ್ರಣದಲ್ಲಿ ಪ್ರಮಾಣೀಕರಿಸಿದ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಂಘವು ಕೆ.ಟಿ.ಟಿ.ಪಿ ಕಾಯಿದೆಯನ್ನು ಅನುಸರಿಸಿ, ರಾಜ್ಯದ ಎಲ್ಲಾ 204 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಮುದ್ರಿತ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲು ಭಾರತದ ದಕ್ಷಿಣವಲಯ ಮಟ್ಟದಲ್ಲಿ ಟೆಂಡರ್‍ನ e-procurement  ಜಾಲತಾಣದಲ್ಲಿ ಕರೆಯಲಾಗುತ್ತದೆ. ಅರ್ಹ ಮುದ್ರಕರು ಟೆಂಡರ್ ನಲ್ಲಿ ಭಾಗವಹಿಸುತ್ತಾರೆ. ಕೆ.ಟಿ.ಟಿ.ಪಿ ಕಾಯಿದೆಯಲ್ಲಿರುವ ನಿಯಮಗಳನ್ನು ಅನುಸರಿಸಿ ಹಾಗೂ ಸಾಮರ್ಥ್ಯ ಮತ್ತು ದರಗಳನ್ನಾಧರಿಸಿ ಭಾಗವಹಿಸಿರುವ ಬಿಡ್ದಾಕರರಲ್ಲಿ ಅರ್ಹ ಮುದ್ರಕರನ್ನು ಪಾರದರ್ಶಕ ವಿಧಾನವನ್ನು ಅನುಸರಿಸಿ ಗುರುತಿಸುತ್ತದೆ. ಮುದ್ರಣ ಹಂತದಲ್ಲಿ  ಕಾಗದದ ಬಳಕೆ ,ಮುದ್ರಣದ ಗುಣಮಟ್ಟ, ಬೈಡಿಂಗ್ ಗುಣಮಟ್ಟ,ಸಕಾಲದಲ್ಲಿ ಪುಸ್ತಕದ ಸರಬರಾಜು   ಈ ಎಲ್ಲಾ  ಅಂಶಗಳನ್ನು ಸಂಘವು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡುತ್ತದೆ.

 1. ಸಮರ್ಪಕ ವಿತರಣಾ ವಿಧಾನದಿಂದ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ತಲುಪಿಸುವುದು.

ಸಾಮಾನ್ಯವಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಹಿಂದಿನ ಆರ್ಥಿಕ ವರ್ಷದಿಂದಲೇ ಪ್ರಾರಂಭಿಸಲಾಗುತ್ತದೆ. ಪಠ್ಯಪುಸ್ತಕಗಳ ಮುದ್ರಣವನ್ನು ಪ್ರಾರಂಭಿಸುವ ಮುನ್ನ ಸರ್ಕಾರಿ,ಅನುದಾನಿತ ಶಾಲೆಗಳಲ್ಲಿ ಹಾಗೂ ಅನುದಾನರಹಿತ ಶಾಲೆಗಳಲ್ಲಿ ತರಗತಿಗಳಲ್ಲಿ ಓದುತ್ತಿರುವ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಾಗುವ ಪಠ್ಯಪುಸ್ತಕಗಳ ಅಂಕಿ ಅಂಶಗಳನ್ನು  ಮೂಲಕ 204 ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆಯಲಾಗುತ್ತದೆ.

 ಸರ್ಕಾರಿ,ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರು SATS ತಂತ್ರಾಂಶದಲ್ಲಿ ತಮಗೆ ಅಗತ್ಯವಿರುವ ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುತ್ತಾರೆ. ಈ ಬೇಡಿಕೆಯು CRP  ಹಂತದಲ್ಲಿ ಪರಿಶೀಲನೆಯಾಗಿ  ಕ್ಷೇತ್ರಶಿಕ್ಷಣಾಧಿಕಾರಿಗಳ ಹಂತದಲ್ಲಿ  ಕ್ರೋಢಿಕರಣವಾಗುತ್ತದೆ. ಈ ಬೇಡಿಕೆ ಪಟ್ಟಿಯನ್ನು ಆಧರಿಸಿ ಆಯಾ ವರ್ಷದ ರಾಜ್ಯ ಮಟ್ಟದ ಬೇಡಿಕೆಯನ್ನು ಅಂತಿಮಗೊಳಿಸಲಾಗುತ್ತದೆ.ಇದರ ಪ್ರಕಾರ ಪಠ್ಯಪುಸ್ತಕಗಳನ್ನು ಮುದ್ರಿಸಿ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತಲುಪಿಸಲಾಗುವುದು. ಸಾಗಾಣಿಕ  ವೆಚ್ಚವನ್ನು ನೀಡುವುದರ ಮೂಲಕ ಪಠ್ಯಪುಸ್ತಕಗಳನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಶಾಲೆಯ  ಬಾಗಿಲಿಗೆ ತಲುಪಿಸಿ  ಪಠ್ಯಪುಸ್ತಕಗಳನ್ನು  ಮಕ್ಕಳಿಗೆ ನೇರವಾಗಿ ನೀಡಲಾಗುತ್ತಿದೆ.

 1. ಮಾರಾಟ ಪಠ್ಯಪುಸ್ತಕಗಳ ವಿತರಣೆ

            ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರು SATS  ತಂತ್ರಾಂಶದಲ್ಲಿ ತಮಗೆ ಅಗತ್ಯವಿರುವ ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುತ್ತಾರೆ. ಇದೇ ತಂತ್ರಾಂಶದಲ್ಲಿ ಲಭ್ಯವಿರುವ Payment Gateway ಮೂಲಕ ಹಣವನ್ನು ಸಂಘಕ್ಕೆ ಪಾವತಿಸಿ ಪಠ್ಯಪುಸ್ತಕಗಳನ್ನು ಸಂಬಂಧಿಸಿದ  ಕ್ಷೇತ್ರಶಿಕ್ಷಣಾಧಿಕಾರಿಗಳ  ಕಛೇರಿಯಿಂದ  ಪಡೆಯುತ್ತಾರೆ.

ಇತ್ತೀಚಿನ ನವೀಕರಣ​ : 03-09-2020 04:58 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಪಠ್ಯಪುಸ್ತಕ ಸಂಘ(ರಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080